ಜನ ಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು – ಮುರಳಿಧರ್ ಪೈ ಬಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಸಾರ್ವಜನಿಕರಿಗೆ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ  ಅಧ್ಯಕ್ಷ ಮುರಳಿಧರ್ ಪೈ ಬಿ. ತಿಳಿಸಿದರು.


ಅವರು ಸೋಮವಾರ ನಗರದ ನ್ಯಾಯಾಲಯದ ಸಂಕೀರ್ಣ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ ಆಯೋಜಿಸಲಾದ ಜಿಲ್ಲಾ ಅರೆ ಕಾನೂನು ಸ್ವಯಂ ಸೇವಕರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ಸಾರ್ವಜನಿಕರು ಕಾನೂನಿನ ಅರಿವನ್ನು ಹೊಂದಿದಾಗ ಮಾತ್ರ ತಮಗಾದ ಅನ್ಯಾಯವನ್ನು ಪ್ರಶ್ನಿಸಲು ಅನೂಕೂಲಕರವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಾರ್ವಜನಿಕರು  ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು. ಅರೆ ಕಾನೂನಿನ ಸ್ವಯಂ ಸೇವಕರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಹಿಸಿರುವ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಸಾರ್ವಜನಿಕರಿಗೆ ತಮ್ಮ ದೈನಂದಿನ ಕೆಲಸಕಾರ್ಯಗಳಿಗೆ ಆಗುತ್ತಿರುವ ಸಮಸ್ಯ ಹಾಗೂ ತೊಂದರೆಗಳ ಬಗ್ಗೆ ಅವರನ್ನು ಪ್ರತಿನಿಧಿಸುವ ಕಾರ್ಯವನ್ನು ಸ್ವಯಂ ಸೇವಕರು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸಪ್ಪ ಬಾಳಪ್ಪ ಜಕಾತಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್.ಎನ್. ಹೆಗ್ಡೆ, ವಕೀಲರ ಸಂಘದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ, ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಿಲ್ಪ ಎ.ಜೆ. ರವರು ಉಪಸ್ಥಿತರಿದ್ದರು.

Also Read  ಒಡಿಯೂರು ಚಾರಿಟೇಬಲ್ ಟ್ರಸ್ಟ್‌ ಕುಂಡಾಜೆ-ರಾಮಕುಂಜ ► ಸ್ವಚ್ಚತಾ ಸಪ್ತಾಹ ಸಮಾರೋಪ, ಪುಸ್ತಕ ವಿತರಣೆ ಕಾರ್ಯಕ್ರಮ

error: Content is protected !!
Scroll to Top