ವಿವೇಕಾನಂದರು ಯುವ ಜನತೆಗೆ ಸ್ಪೂರ್ತಿ ➤ ನಾ ಸೀತಾರಾಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ ಕಾಲೇಜಿನ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಯೋಜಿಸಲಾಗಿತ್ತು.

ಈ ಜಗತ್ತಿನಲ್ಲಿಅಸಾಧ್ಯ ಎನ್ನುವ ಕೆಲಸ ವಿಚಾರಗಳು ಯಾವುದೂ ಇಲ್ಲ, ಪ್ರಯತ್ನ, ಹಠ, ಛಲದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಸ್ವಾಮಿ ವಿವೇಕಾನಂದರು ದೇಶದ ಶಕ್ತಿ, ಯುವಜನತೆಗೆ ಸ್ಪೂರ್ತಿ ಅಂತಹ ಚೇತನವನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಸ್ಮರಿಸಬೇಕು. ಇಂದಿನ ಜಾಗತಿಕ ಯುಗದಲ್ಲಿ ಜನರು ಮಾನವೀಯ ಮೌಲ್ಯಗಳನ್ನು ಮರೆತು ಬದುಕುತ್ತಿದ್ದಾರೆ. ಎಲ್ಲವೂ ಯಾಂತ್ರಿಕ ಎಲ್ಲರೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನುತಾವು ಗುರುತಿಸುವ ಭರದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಹಾತೊರೆಯುತ್ತಾರೆಯೇ ಹೊರೆತು ಅವರಲ್ಲಿ ಧೈರ್ಯ, ಆತ್ಮ ಸ್ಥೈರ್ಯ ಮೊದಲಾದ ಗುಣಗಳನ್ನು ನೀಡಲು ವಿಫಲರಾಗುತ್ತಿದ್ದಾರೆ. ಯುವ ಶಕ್ತಿ ದೇಶದ ಆಸ್ತಿ ಆದುದರಿಂದ ನಾವೆಲ್ಲರೂ ನಮ್ಮೊಳಗಿನ ವಿವೇಕವನ್ನು ಎಚ್ಚರಿಸಿ, ವಿವೇಕಾನಂದರ ಚಿಂತನೆಗಳನ್ನು ಓದಿ ತಿಳಿದು ಅದರಂತೆ ಬದುಕೋಣ ಎಂದು ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ 159ನೇ ರಾಷ್ಟ್ರೀಯ ಯುವ ದಿನಾಚರಣೆಯ ಉದ್ಘಾಟಕರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ, ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖರಾದ ನಾ ಸೀತಾರಾಮ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Also Read  ಪದವಿಯಲ್ಲಿ ತುಳು ಕಲಿಕೆ ಸ್ವಾಗತಾರ್ಹ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಸಂಜಿತ್ ನಾೈಕ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಯುವಜನತೆಗೆ ಸ್ವಾಮಿ ವಿವೇಕಾನಂದರು ಪ್ರೇರಿತ ಶಕ್ತಿ, ರಾಷ್ಟ್ರೀಯತೆ, ಸ್ವಾಭಿಮಾನ, ಬದುಕಿನ ಕುರಿತು ಅವರ ವಿಚಾರಗಳನ್ನು ಕೇವಲ ಯುವಜನತೆ ಮಾತ್ರವಲ್ಲಎಲ್ಲರೂ ಓದಿ ತಿಳಿಯಬೇಕು. ಈ ರೀತಿಯಾಗಿ ಮನುಷ್ಯನ ಬದುಕಿನ ಪ್ರತಿಯೊಂದು ಆಯಾಮಗಳಿಗೂ ವಿವೇಕವಾಣಿ ಬೆಳಕು ಚೆಲ್ಲಲಿ ಎಂದು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ ನಾೈಕ್‍ರವರು ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿಯನ್ನುಜಗತ್ತಿನಾದ್ಯಂತ ಹರಡಿ, ಅವರ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಧೀಮಂತ ವ್ಯಕ್ತಿ . ಇಂದಿನ ಯುವ ಪೀಳಿಗೆಯ ಕೆಚ್ಚೆದೆಯಲ್ಲಿ ತಾಯಿ ಭಾರತ ಮಾತೆಯ ಬಗ್ಗೆ ಭಕ್ತಿ, ಗೌರವ ಭಾವ ಇದೆಯೆಂದಾದರೆ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ, ಆದರ್ಶ ನುಡಿಗಳೇ ಪ್ರೇರಣೆ ಎಂದರು. ಕಾರ್ಯಕ್ರಮದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‍ನ ಮುಖ್ಯ ಸಲಹೆಗಾರರಾದ ರಮೇಶ್‍ ಕೆ, ಸಂಸ್ಥೆಯ ಅಭಿವೃದ್ಧಿಅಧಿಕಾರಿ ಪ್ರಖ್ಯಾತ್‍ ರೈ, ಗೋಪಾಲಕೃಷ್ಣ ಪೂರ್ವ ಶಾಲೆಯ  ಸಹ ಸಂಯೋಜಕಿ ನೀಮಾ ಸಕ್ಸೇನಾ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್‍ಎಮ್. ಕೆ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ. ಹಾಗೂ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಪ್ರೀತಿಕೀರ್ತನ್ ನಿರೂಪಿಸಿದರು, ರೇಖಾ ಬಿ. ಬೈಕಾಡಿ ಸ್ವಾಗತಿಸಿ, ಶಿಕ್ಷಕ ಶ್ರೀವರ ವಂದಿಸಿದರು.

Also Read  ಬೆಳಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ► ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ

error: Content is protected !!
Scroll to Top