SKIMVB ಕೇಂದ್ರೀಯ ಸದಸ್ಯರಾಗಿ ಶರೀಫ್ ಫೈಝಿ ಕಡಬ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ.13. ದೇಶದ ಅತ್ಯುನ್ನತ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಮಂಡಳಿಯಾದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ (SKIMVB) ಇದರ ಕೇಂದ್ರೀಯ ಸದಸ್ಯರಾಗಿ ಕರ್ನಾಟಕದಿಂದ ಸಮಸ್ತ ಜಂಇಯ್ಯತುಲ್ ಉಲೆಮಾ ಕರ್ನಾಟಕ ಮುಶಾವರ ಸಂಘಟನಾ ಕಾರ್ಯದರ್ಶಿ ಶರೀಫ್ ಫೈಝಿ ಕಡಬ ಆಯ್ಕೆಯಾಗಿದ್ದಾರೆ.

ವಿವಿಧ ರಾಜ್ಯಗಳ ಪ್ರತಿನಿಧಿಗಳಿರುವ ಈ ಶಿಕ್ಷಣ ಮಂಡಳಿಯ ಅಧೀನದಲ್ಲಿ 10 ಸಾವಿರಕ್ಕೂ ಮಿಕ್ಕಿದ ಮದ್ರಸಗಳು ಕಾರ್ಯಾಚರಿಸುತ್ತಿದೆ. ಸಮಸ್ತದ ನಿಸ್ವಾರ್ಥ ಸೇವಕರೂ, ಸಂಘಟನಾ ಚತುರರೂ ಆಗಿರುವ ಶರೀಫ್ ಫೈಝಿ ಕಡಬರವರು ಜಿಲ್ಲೆ ಮತ್ತು ರಾಜ್ಯ ಫೈಝೀಸ್ ಅಸೊಸಿಯೇಶನ್ ಇದರ ಉಪಾಧ್ಯಕ್ಷ ಹಾಗೂ ಕೋಶಾಧಿಕಾರಿಯಾಗಿ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Also Read  ಅನ್ನ ಮಾಡಿಲ್ಲವೆನ್ನುವ ಕೋಪದಲ್ಲಿ ಪತ್ನಿಯನ್ನೇ ಹತ್ಯೆ ಮಾಡಿದ ಪತಿ

error: Content is protected !!
Scroll to Top