ಮೊದಲ ಬಾರಿಗೆ ಸುಳ್ಯಕ್ಕೆ ಒಲಿದ ಸಚಿವ ಸ್ಥಾನ ➤ ಶಾಸಕ ಎಸ್‌.ಅಂಗಾರರಿಗೆ ಮಂತ್ರಿಗಿರಿ ಫಿಕ್ಸ್

(ನ್ಯೂಸ್ ಕಡಬ) newskadaba.com ಸುಳ್ಯ, ಜ.12. ಹಿರಿಯ ಶಾಸಕ ಎಸ್.ಅಂಗಾರರವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದು, ಮಾಹಿತಿ ತಿಳಿದ ಸುಳ್ಯ ಮಂಡಲ ಬಿಜೆಪಿಯಲ್ಲಿ ಸಂತೋಷ ಮನೆ ಮಾಡಿದೆ.

ಆರು ಬಾರಿ ಗೆದ್ದು ಸುಳ್ಯದ ಶಾಸಕರಾಗಿರುವ ಎಸ್. ಅಂಗಾರರು ನಾಳೆ ಬಿಎಸ್ ಯಡಿಯೂರಪ್ಪ ಸಂಪುಟಕ್ಕೆ ಸೇರುವುದಕ್ಕಾಗಿ ಖುದ್ದು ಮುಖ್ಯಮಂತ್ರಿಯೇ ಶಾಸಕರಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿದ್ದಾರೆ. ಇನ್ನು ಅಂಗಾರರು ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಸುಳ್ಯ ಮಂಡಲ ಬಿಜೆಪಿ ಖಚಿತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಹೊರಡಿಸಿದೆ.

Also Read  ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್ ಗಳಲ್ಲಿ ಮತದಾನ

error: Content is protected !!
Scroll to Top