ಕೆಲಸದವನ ಲವ್ವಿಡವ್ವಿಗೆ ಮನಸೋತ ಮಾಯಾವಿ ➤ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪಾಪಿ ಪತ್ನಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.11. ಮನೆಯ ಕೆಲಸದವನ ಜೊತೆ ಸೇರಿ ಮುದ್ದಿನ ಮಡದಿಯೇ ಗಂಡನನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಪ್ರಕರಣವನ್ನು ತಡವಾಗಿ ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಂಗಳೂರು ಉತ್ತರದ ತೋಟದ ಗುಡ್ಡದಹಳ್ಳಿ ನಿವಾಸಿ ಶಿವಲಿಂಗಯ್ಯ ಎಂಬವರ ಪತ್ನಿ ಶೋಭಾ ಹಾಗೂ ಕೆಲಸದಾಳು ರಾಮ‌ ಎಂದು ಗುರುತಿಸಲಾಗಿದೆ. ಆರೋಪಿಗಳು ಅಕ್ರಮ ಸಂಬಂಧ ಹೊಂದಿದ್ದು, ಜೂನ್​ 1 ರಂದು ಶಿವಲಿಂಗಯ್ಯನನ್ನು ಕೊಲೆ ಮಾಡಿ ಮೃತದೇಹವನ್ನು ಕಸದ ರಾಶಿಯಲ್ಲಿ ಹೂತ್ತಿಟ್ಟಿದ್ದರು. ಶಿವಲಿಂಗಯ್ಯ ಕಾಣದ್ದನ್ನು ಗಮನಿಸಿದ ಆತನ ಸಹೋದರ ನವೆಂಬರ್​ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ವೃದ್ದನೋರ್ವನನ್ನು ವಿಚಾರಣೆ ನೆಪದಲ್ಲಿ ವಿನಾಕಾರಣ ಅಲೆದಾಡಿಸಿದ ಪೊಲೀಸ್ ಸಿಬ್ಬಂದಿಗಳು ➤ಪೊಲೀಸರ ವರ್ತನೆಯಿಂದ ಬೇಸರ ವ್ಯಕ್ತಪಡಿಸಿದ ವೃದ್ದ 

error: Content is protected !!
Scroll to Top