ಎಲ್ಲರ ಚಿತ್ತ ಸಂಪುಟ ವಿಸ್ತರಣೆಯತ್ತ..‼️ ➤ ಸುಳ್ಯದ ಬಂಗಾರ ಎಸ್. ಅಂಗಾರರಿಗೆ ಸಚಿವ ಸ್ಥಾನ..⁉️

(ನ್ಯೂಸ್ ಕಡಬ) newskadaba.com ಸುಳ್ಯ, ಜ.11. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಜನವರಿ 13 ರಂದು ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿರುವುದರ ನಡುವೆಯೇ ಕರಾವಳಿ ಕರ್ನಾಟಕದ ಹಿರಿಯ ಶಾಸಕ ಎಸ್. ಅಂಗಾರರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಕುತೂಹಲ ಮನೆಮಾಡಿದೆ.

ಬಿಜೆಪಿಯ ಭದ್ರಕೋಟೆ ಕರಾವಳಿಯಲ್ಲಿ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಎದುರಾಗಿದ್ದು, ಸತತ 6 ಬಾರಿ ಗೆದ್ದಿರುವ ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರರವರಿಗೆ ಈ ಬಾರಿಯಾದರೂ ಅದೃಷ್ಟ ಖುಲಾಯಿಸಬಹುದೇ ಎಂಬ ಕುತೂಹಲ ಗರಿಗೆದರಿದೆ. ಸದ್ಯ ಯಡಿಯೂರಪ್ಪ ಸಂಪುಟದಲ್ಲಿ ಕರಾವಳಿಯಿಂದ ಮೇಲ್ಮನೆ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದು, ಸಂಪುಟ ಪುನ ರ್ ರಚನೆಯಾದರೆ ಅವರ ತಲೆದಂಡವಾಗುವುದು ಖಚಿತ ಎನ್ನಲಾಗಿದೆ. ಶಾಸಕ ಎಸ್. ಅಂಗಾರ, ಕಾರ್ಕಳದ ಸುನೀಲ್‍ಕುಮಾರ್, ಕುಂದಾಪುರದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಇನ್ನು ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

Also Read  ಸುಳ್ಯದ ವಿವಿಧೆಡೆ ಭೂಮಿ ಕಂಪಿಸಿದ ಅನುಭವ ➤ ಆತಂಕದಲ್ಲಿ ಜನತೆ

error: Content is protected !!
Scroll to Top