ಮಂಗಳೂರು: ಹಲವು ಕಡೆ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಹಲವಾರು ಕಳ್ಳತನಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಓರ್ವ ಕಳ್ಳನನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ರಾಜೇಶ್ ನಾಯ್ಕ(42) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ನಿವಾಸಿಯಾಗಿರುವ ಈತ ಪ್ರಸ್ತುತ ಉಡುಪಿ ಇಂದ್ರಾಳಿ ದುರ್ಗಾನಗರದಲ್ಲಿ ವಾಸಿಸುತ್ತಿದ್ದನು ಎನ್ನಲಾಗಿದೆ. ಈತ ಹಲವು ಕಡೆ ಕಳ್ಳತನ ನಡೆಸಿದ್ದು, ಕುಳಾಯಿ ಗ್ರಾಮದ ರವಿಶೆಟ್ಟಿ, ಈಡ್ಯಾ ಗ್ರಾಮದ ಗುಡ್ಡೆ ಕೊಪ್ಪಳ ರಾಮಂಜನೇಯ ಭಜನಾ ಮಂದಿರ ಹಾಗೂ ಸತೀಶ್ ಸುವರ್ಣ ಅವರ ಕುಟುಂಬಕ್ಕೆ ಸೇರಿದ ದೈವಸ್ಥಾನದಿಂದ ರಾಜೇಶ್ ಈತ ಕಳ್ಳತನ ಮಾಡಿದ್ದಾನೆ. ಬಂಧಿತ ಆರೋಪಿಯಿಂದ  47 ಗ್ರಾಂ ಚಿನ್ನ ,16 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  9 ಮಂದಿ ಐಪಿಎಸ್ ಗಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ ಸರಕಾರ ➤ ಸಿಐಡಿ ಎಸ್ಪಿಯಾಗಿದ್ದ ರವಿ ಡಿ.ಚನ್ನಣ್ಣನವರ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ...!

error: Content is protected !!
Scroll to Top