ಮೀನಾಡಿ: ಯುವ ಬ್ರಿಗೇಡ್ ವತಿಯಿಂದ ಸ್ವಚ್ಚತಾ ಕಾರ್ಯ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ.11. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಯುವ ಬ್ರೀಗೇಡ್ ಕಡಬ ವತಿಯಿಂದ ಸ್ವಚ್ಚತೆ ಹಾಗೂ ಶ್ರಮದಾನ ರವಿವಾರ ನಡೆಯಿತು.

ಶಾಲಾ ವಠಾರ ಸ್ವಚ್ಚತೆ, ಹುಲ್ಲು ಕತ್ತರಿಸುವುದು ಹಾಗೂ ಶೌಚಾಲಯದ ಗೋಡೆಗೆ ಬಣ್ಣ ಬಳಿಯಲಾಯಿತು. ವಿಶೇಷ ಎಂದರೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಬ್ರೀಗೇಡ್ ಸದಸ್ಯ ನೂಜಿಬಾಳ್ತಿಲ ಗ್ರಾಮದ ನೀರಾರಿ ಕಿಶೋರ್ ಹಾಗೂ ಭವ್ಯಾ ದಂಪತಿ ಮದುವೆಯಾದ ಮರುದಿನವೇ ಈರ್ವರು ಕೂಡಾ ವಾರದ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು  ಗಮನ ಸೆಳೆದರು. ಕಳೆದ ಕೆಲ ವರ್ಷಗಳಿಂದ ಸ್ವಚ್ಚತಾ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಯುವಬ್ರೀಗೇಡ್ ತಂಡ ಎರಡು ರವಿವಾರ ವಜ್ರ ಮಹೋತ್ಸವ ಸಂಭ್ರಮದಲ್ಲಿರುವ ಮೀನಾಡಿ ಶಾಲೆಯಲ್ಲಿ ಸ್ವಚ್ಚತಾ ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಿದರು. ಶಾಲಾ ಮುಖ್ಯ ಶಿಕ್ಷಕ ಗೋವಿಂದ ನಾಯಕ್ ಹಾಗೂ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುತ್ತು ಕುಂಞಿ ಉಪಸ್ಥಿತರಿದ್ದು, ಕೃತಜ್ಞತೆ ಸಲ್ಲಿಸಿದರು.

Also Read  ಅಡ್ಯಾರ್ ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ

error: Content is protected !!
Scroll to Top