ಜ. 13ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…! ➤ ಶಾಸಕರಿಗೆ ಒಲಿಯಲಿದೆ ಮಂತ್ರಿಭಾಗ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 11. ಹಲವು ತಿಂಗಳುಗಳಿಂದ ಕುತೂಹಲ ಮೂಡಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಅದರಂತೆ ಜ. 13ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.

ಬಿಜೆಪಿ ವರಿಷ್ಠರ ಸೂಚನೆಯಂತೆ ಭಾನುವಾರ ಮುಖ್ಯಮಂತ್ರಿಯವರು ದೆಹಲಿಗೆ ಹೋಗಿ ಬಂದಿದ್ದು, ಏಳು ಸಚಿವ ಸ್ಥಾನಗಳ ಭರ್ತಿಗೆ ಗ್ರೀನ ಸಿಗ್ನಲ್ ದೊರೆತಿದೆ. ಆದರೆ ಯಾರಿಗೆ ಶಾಸಕರಾಗುವ ಅದೃಷ್ಟ ದೊರೆಯಲಿದೆ ಎನ್ನುವುದು ಇಂದು ತಿಳಿಯಲಿದೆ. ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಸೂಚಿಸಿದ್ದು, ಜ. 14ರಂದು ಸಂಕ್ರಾಂತಿ ಇರುವ ಕಾರಣ ಜ. 13ರ ಮಧ್ಯಾಹ್ನ ನಂತರ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ಬಿಎಸ್.ವೈ ತಿಳಿಸಿದ್ದಾರೆ.

Also Read  ವಿಧಾನಸಭೆ ಚುನಾವಣೆ ಸೋಲಿಗೆ ಎದೆಗುಂದಬೇಡಿ..!➤ಎಚ್‌.ಡಿ.ದೇವೇಗೌಡ

error: Content is protected !!
Scroll to Top