ಸುಬ್ರಹ್ಮಣ್ಯ ದೇಗುಲದ ಆಸ್ತಿಯ ರಕ್ಷಣೆ ಮಾಡುವಂತೆ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಶಿರಾಡಿ ಮನವಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 11. ರಾಜ್ಯದ ಪ್ರಮುಖ ಶ್ರದ್ದಾಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ  ಜಾಗವನ್ನು ಯಾವುದೇ ಇಲಾಖೆ ಅಥವಾ ಸಂಸ್ಥೆಗಳಿಗೆ ಪರಭಾರೆ ಮಾಡುವುದು ಸರಿಯಲ್ಲ. ದೇವಸ್ಥಾನದ ಜಾಗವನ್ನು ಉಳಿಸಿಕೊಂಡು ದೇವಸ್ಥಾನದ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಒತ್ತಾಯಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿಯವರು ಮನವಿ ಮಾಡಿದ್ದಾರೆ.

 

 

ಯಾವುದೇ ಇಲಾಖೆಗೆ ಪರಭಾರೆ ಮಾಡಿದರೂ ಅದು ದೇವಸ್ಥಾನದ ಆಸ್ತಿಯಾಗಿ ಇರುವುದಿಲ್ಲ, ಆದ್ದರಿಂದ ದೇವಾಲಯದ ಅಭಿವೃದ್ದಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ. ಈಗಾಗಲೇ ನೀಡಿರುವ ಶ್ರೀ ಸುಬ್ರಾಯ ದೇವರ ಕೆಲವು ಆಸ್ತಿಗಳು ದೇವಸ್ಥಾನದ ಕೈತಪ್ಪಿ ಹೋಗಿ ಅಭಿವೃದ್ದಿಗಾಗಿ ಕೊಟ್ಯಾಂತರ ರೂಪಾಯಿ ಬೆಲೆ ನೀಡಿ ದೇವಸ್ಥಾನವೇ ಖಾಸಗಿ ಆಸ್ತಿಯನ್ನು ಪಡೆಯುತ್ತಿರುವ ವಿಚಾರ ನಮಗೆ ತಿಳಿದಿದೆ. ದೇವಳದ ಅತ್ಯಮೂಲ್ಯವಾದ ಅಭಿವೃದ್ದಿ ಕಾರ್ಯಗಳಿಗೆ ಅವಶ್ಯವಾದ ಆಸ್ತಿಯನ್ನು ಯಾವುದೇ ಇಲಾಖೆಯಾಗಲೀ, ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗಾಗಲಿ ಪರರ ವಶ ಮಾಡಬಾರದು, ದೇವಸ್ಥಾನದ ಆಸ್ತಿಯನ್ನು ಕಾಪಾಡುವ, ರಕ್ಷಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮೋನಪ್ಪ ಮಾನಾಡು, ರವೀಂದ್ರ ರುದ್ರಪಾದ,ಜಯರಾಮ ಕಟ್ಟೆಮನೆ, ಉಮೇಶ್ ಕಜ್ಜೋಡಿ, ಶಶಿಧರ ಮೊದಲಾದವರು ಉಪಸ್ಥಿತರಿದ್ದರು.

Also Read  ನೂಜಿಬಾಳ್ತಿಲ: ಉಚಿತ ಆಯುಷ್ಮಾನ್ ನೋಂದಣಿ ಅಭಿಯಾನ

error: Content is protected !!
Scroll to Top