ಅಕ್ರಮ ಜಾನುವಾರು ಸಾಗಾಟ ➤ ವಾಹನವನ್ನು ತಡೆದು ಬಜರಂಗದಳ ಕಾರ್ಯಕರ್ತರಿಂದ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ. 10. ಕ್ಯಾಂಟರ್ ವೊಂದರಲ್ಲಿಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬಜರಂಗದಳದ ಕಾರ್ಯಕರ್ತರು ಕ್ಯಾಂಟರ್ ತಡೆದು ಚಾಲಕನಿಗೆ ಹಲ್ಲೆ ಮಾಡಿದ ಘಟನೆ ಆಗುಂಬೆ ರಸ್ತೆಯ ಕೈಮನೆ ಗ್ರಾಮದ ಬಳಿ ನಡೆದಿದೆ.

ಕ್ಯಾಂಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರೆನ್ನಲಾದ ಜಾನುವಾರುಗಳನ್ನು ಬಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ತನಿಕೋಡು ಚೆಕ್‍ಪೋಸ್ಟ್ ಬಳಿ ಕಾರ್ಯಕರ್ತರು ಕ್ಯಾಂಟರ್ ನ್ನು ಅಡ್ಡಗಟ್ಟಿದಾಗ ಕ್ಯಾಂಟರ್ ಚಾಲಕ ಹಾಗೂ ಮತ್ತೋರ್ವ ವಾಹನವನ್ನೇ ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಆಗುಂಬೆ ರಸ್ತೆಯ ಕೈಮನೆ ಗ್ರಾಮದ ಬಳಿ ಕಾರ್ಯಕರ್ತರು ಕ್ಯಾಂಟರ್ ಚಾಲಕನಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಗಾಯಗೊಂಡಿರುವ ಆತನನ್ನು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿಗಳು ರಾಣಿಬೆನ್ನೂರಿನ ಎರಡು ಕ್ಯಾಂಟರ್ ಗಳಲ್ಲಿ ಒಟ್ಟು 34 ಎತ್ತು ಹಾಗೂ ಎಮ್ಮೆಗಳನ್ನು ಮಂಗಳೂರಿಗೆ ಸಾಗಣೆ ಮಾಡುತ್ತಿದ್ದರೆಂದು ತಿಳಿದುಬಂದಿದ್ದು, ಕ್ಯಾಂಟರ್ ಸಾಗುವ ಮೊದಲು ಕೆರೆಕಟ್ಟೆ ಮಾರ್ಗವಾಗಿ ಒಂದು ಸ್ಕಾರ್ಫಿಯೋ ಹಾಗೂ ಇನೊವಾ ಕಾರುಗಳು ಹೋಗಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Also Read  ಸ್ವತಃ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿ ಊಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ ಜಿ.ಪಂ. ಸಿಇಒ

error: Content is protected !!
Scroll to Top