ಬೈಕಂಪಾಡಿ: ಸ್ಪ್ರಿಂಗ್ ಉತ್ಪಾದನಾ ಕೇಂದ್ರದಲ್ಲಿ ಬೆಂಕಿ ಅನಾಹುತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 09. ಕೈಗಾರಿಕಾ ವ್ಯಾಪ್ತಿಯ ಸ್ಪ್ರಿಂಗ್ ಉತ್ಪಾದನಾ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ.


ಶುಕ್ರವಾರ ಸಂಜೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ತಕ್ಷಣ ಸ್ಥಳೀಯ ಎಂ.ಸಿ.ಎಫ್ ಮತ್ತು ಕದ್ರಿಯ ಅಗ್ನಿಶಾಮಕ ಸಿಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರು. ಈ ಘಟನೆಯ ವೇಳೆ ರಾತ್ರಿ ಪಾಳಿಯ ಕಾರ್ಮಿಕರು ಕೆಲಸ ಮಾಡುತ್ತಿದ್ದು, ವಿರಾಮದ ಕಾರಣ ಕೆಲವರು ಚಹಾಕ್ಕೆಂದು ಹೊರಗೆ ತೆರಳಿದ್ದರು. ಅದೃಚ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Also Read  ದೇಶದಲ್ಲಿ10 ಪರಮಾಣು ಶಕ್ತಿ ರಿಯಾಕ್ಟರ್‌ಗಳ ಸ್ಥಾಪನೆ ➤ಸರ್ಕಾರದಿಂದ ಅನುಮತಿ!

error: Content is protected !!
Scroll to Top