(ನ್ಯೂಸ್ ಕಡಬ) newskadaba.com ಮಂಗಳೂರು, ಜ. 08. ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಭ್ರಷ್ಟಾಚಾರ ವಿರೋಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ಎಲ್ಲಾ ಫುಡ್ ಸೇಫ್ಟಿ ಲೈಸೆನ್ಸ್ ಗಳನ್ನು ಅಂಚೆ ಮೂಲಕ ಕಳಿಸಲಾಗುವುದು ಅಥವಾ ಆಹಾರ ಉದ್ಯಮಿಗಳು ತಾವು ಅರ್ಜಿ ಸಲ್ಲಿಸಿದ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಮುಖಾಂತರ ತಮ್ಮ ಫುಡ್ ಸೇಫ್ಟಿ ಲೈಸೆನ್ಸ್ ಗಳನ್ನು ಮುದ್ರಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಅಧಿಕಾರಿಗಳ ಸಹಿಯ ಅಗತ್ಯವಿರುವುದಿಲ್ಲ ಇದನ್ನು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪರೀಕ್ಷಿಸಿಕೊಳ್ಳಬಹುದು. ಅಥವಾ ವೆಬ್ ಸೈಟ್ ಅಡ್ರೆಸ್ ಮೂಲಕ www.foscos.fssai.gov.in ನಲ್ಲಿ FBO SEARCH ನಲ್ಲಿ ಲೈಸನ್ಸ್ ಸಂಖ್ಯೆ ನಮೂದಿಸಿ ಪರೀಕ್ಷಿಸಿಕೊಳ್ಳಬಹುದು. ಇದುವರೆಗೆ ಬಾಕಿ ಇದ್ದ ಹೆಚ್ಚಿನ ಎಲ್ಲಾ ಲೈಸೆನ್ಸ್ ಗಳನ್ನು ಜನರೇಟ್ ಮಾಡಲಾಗಿದೆ. ಆದ್ದರಿಂದ ಲೈಸೆನ್ಸ್ ಪಡೆದುಕೊಂಡು ಹೋಗಲು ಯಾರಾದರೂ ಕರೆ ಮಾಡಿದರೆ ಅಂಚೆ ಮುಖೇನ ಕಳುಹಿಸಿಕೊಡಲು ಅವರಿಗೆ ನಿರ್ದೇಶಿಸಬಹುದು. ಫುಡ್ ಸೇಫ್ಟಿ ಲೈಸೆನ್ಸ್ ಗಳನ್ನು ಪಡೆಯಲು ಯಾವುದೇ ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸದಿರಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಆಹಾರ ಸುರಕ್ಷತ ಮತ್ತು ಗುಣಮಟ್ಟ ಕಾಯ್ದೆಯ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಹೆಚ್. ಮೊ.ಸಂ.: 8217749481 ಅನ್ನು ಸಂಪರ್ಕಿಸಬಹುದು ಎಂದು ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.