ಆಹಾರ ಗುಣಮಟ್ಟ ಮತ್ತು ಸ್ವಚ್ಛತಾ ಕಾಳಜಿ ಬೆಳೆಸಲು ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 08. ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರು, ಆಹಾರ ಸಂಸ್ಕರಣಾ ಉದ್ಯಮದವರು ಹಾಗೂ ವಿವಿಧ ಎಲ್ಲಾ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಗುಣಮಟ್ಟ ಉದ್ದೇಶಗಳನ್ನು ಬಲಪಡಿಸುವ ಸಲುವಾಗಿ FSSAI ಪ್ರಾಧಿಕಾರವು, FoSTAC ಎಂಬ ಕಾರ್ಯಕ್ರಮದ ಮೂಲಕ ಆಹಾರ ಗುಣಮಟ್ಟ ಮತ್ತು ಸ್ವಚ್ಛತಾ ಕಾಳಜಿಯನ್ನು ಬೆಳೆಸಲು ತರಬೇತಿದಾರರಿಂದ ಮತ್ತು ನಿಯಂತ್ರಕ ಕಾರ್ಯಕರ್ತರನ್ನು ವಿವಿಧ ಮಟ್ಟದಲ್ಲಿ ನಿರ್ಮಿಸಲು ಪ್ರಯತ್ನಿಸುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಈ ತರಬೇತಿ ಮತ್ತು ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.


ಎಲ್ಲಾ ಆಹಾರ ವಹಿವಾಟು/ ಉದ್ದಿಮೆದಾರರು, ಅತೀ ಸಣ್ಣ ಹಾಗೂ ಅತೀ ದೊಡ್ಡ ಉದ್ದಿಮೆದಾರರು ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಕಿತ ಅಧಿಕಾರಿ ಕಾರ್ಯಾಲಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಜಿಲ್ಲಾ ಸರ್ವೇಕ್ಷಣಾ ಘಟಕ ಆವರಣ, ಅತ್ತಾವರ, ಮಂಗಳೂರು ಹಾಗೂ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕೋರ್ಟ್ ಕಲಾಪದ ವೇಳೆ ಅರೆನಗ್ನ ಸ್ಥಿತಿಯಲ್ಲಿ ಎಂಟ್ರಿ ಕೊಟ್ಟ ಕರಾವಳಿಯ ವಕೀಲ...! ➤ ನಿಜಕ್ಕೂ ಅಲ್ಲಿ ಆಗಿದ್ದೇನು?

error: Content is protected !!
Scroll to Top