(ನ್ಯೂಸ್ ಕಡಬ) newskadaba.com ಮಂಗಳೂರು, ಜ. 08. ರಸ್ತೆ ಅಗೆಯುವ ಭರದಲ್ಲಿ ಕುಡಿಯುವ ನೀರಿನ ಮುಖ್ಯ ಪೈಪ್ ಒಡೆದು ಹೋಗಿ ಸುತ್ತಮುತ್ತಲಿನ ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿದ ಘಟನೆ ಕೊಂಚಾಡಿ ನಾಗಕನ್ನಿಕಾ ದ್ವಾರಕದ ಬಳಿ ನಡೆದಿದೆ.
ರಸ್ತೆ ಕಾಂಕ್ರಿಟೀಕರಣ ಗುತ್ತಿಗೆದಾರರು ವಹಿಸಿಕೊಂಡ ರಸ್ತೆ ದುರಸ್ತಿಯ ಭರದಲ್ಲಿ ನೀರಿನ ಪೈಪ್ ಒಡೆದು ಹೋಗಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ನೀರಿನ ಅಭಾವ ಉಂಟಾಗಿದ್ದು, ಹಾಗೂ ಅಂಗಡಿಗಳಿಗೆ ಮನೆಗಳಿಗೆ ನುಗ್ಗಿದ ನೀರು ನುಗ್ಗಿದ ಪರಿಣಾಮ ವಸ್ತುಗಳೆಲ್ಲ ಹಾಳಾಗಿದ್ದು ಇದರಿಂದ ಬೇಸತ್ತ ಸಾರ್ವಜನಿಕರು ಬೇಜವಾಬ್ದಾರಿ ಸಂಸ್ಥೆಯ ಬಗ್ಗೆ ಮಹಾನಗರ ಪಾಲಿಕೆಯು ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.