ಕಡಬ: ದಿವಂಗತ ಜಯರಾಮ ಅರ್ತಿಲ ಅವರಿಗೆ ನುಡಿನಮನ

(ನ್ಯೂಸ್ ಕಡಬ) newskadaba.com ಕಡಬ, ಜ. 07. ಕಡಬದ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಜಯರಾಮ ಆರ್ತಿಲ ಅವರಿಗೆ ನುಡಿನಮನ ಕಾರ್ಯಕ್ರಮ ಗುರುವಾರದಂದು ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.


ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಯವರು ಪ್ರಸ್ತಾವಿಕವಾಗಿ ಮಾತನಾಡಿ, ಜಯರಾಮರವರು ಸಮಾಜದಲ್ಲಿ ಎಲ್ಲರೊಂದಿಗೂ ಹೊಂದಾಣಿಕೆಯಿಂದ ಇರುತ್ತಿದ್ದರು. ತಾವು ಗಳಿಸಿದ್ದನ್ನು ಸಮಾಜಕ್ಕೂ ಒಂದು ಪಾಲು ಕೊಡುವ ಗುಣವುಳ್ಳವರು. ಆರ್ಥಿಕ ಶಿಸ್ತು ಅನುಕರಣೀಯವಾಗಿದ್ದು ಉತ್ತಮ ನಾಯಕತ್ವ ಮತ್ತು ಸಮಚಿತ್ತದಿಂದ ನಿಭಾಯಿಸುತ್ತಿದ್ದರು. ಅವರ ಸಾಮಾಜಿಕ ಕಾರ್ಯಗಳು ನಮಗೆ ಪ್ರೇರಣೆ ಎಂದರು. ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಜಯರಾಮ ಅವರದು ಆದರ್ಶ ವ್ಯಕ್ತಿತ್ವ. ರಾಜಕೀಯವಾಗಿಯೂ ಸಕ್ರಿಯರಾಗಿದ್ದ ಅವರ ಕೊಡುಗೆ ಮರೆಯಾಗದು ಎಂದರು.

Also Read  ಮಕ್ಕಳ ಮದುವೆಗೆ ಅಡೆತಡೆಗಳು ಜಾಸ್ತಿಯಾಗಿದ್ದರೆ ಈ ಒಂದು ಕೆಲಸ ಮಾಡಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

ಸೀತಾರಾಮ ಗೌಡ ಪೊಸವಳಿಕೆ, ಸಿಎ ಬ್ಯಾಂಕ್ ನಿರ್ದೇಶಕ ಎ.ಪಿ ಗಿರೀಶ್ ಮೊದಲಾದವರು ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು. ಜೆಸಿಐ ಕಡಬ ಕದಂಬ ಘಟಕದ ಅಧ್ಯಕ್ಷ ಮೋಹನ್ ಕೋಡಿಂಬಾಳ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ರೈ ಅರ್ತಿಲ ಧನ್ಯವಾದ ಸಲ್ಲಿಸಿದರು. ಮೃತ ಜಯರಾಮ ಅವರ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

error: Content is protected !!
Scroll to Top