ವಿಟ್ಲ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 07. ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಸಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ.

ಮೃತರನ್ನು ಬಾಲಕೃಷ್ಣ ಎಂಬವರ ಪತ್ನಿ ವನಿತಾ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಜೊತೆಗೆ ಮೂರು ವರ್ಷದ ವಿಕಲಚೇತನ ಹೆಣ್ಣು ಮಗುವಿದೆ. ಮತ್ತಿಬ್ಬರು ಹೆಣ್ಣುಮಕ್ಕಳನ್ನು ಕನ್ಯಾನದ ಭಾರತ ಸೇವಾಶ್ರಮಕ್ಕೆ ದಾಖಲಿಸಲಾಗಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಪತಿ ಪತ್ನಿ ಇಬ್ಬರೂ ಕುಡಿತದ ಚಟ ಹೊಂದಿದ್ದು, ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ ಎಂದು ಪತಿ ತಿಳಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Also Read  ಲೋಕಾಯುಕ್ತ ಅಧಿಕಾರಿಗಳಿಂದ ಜಿಲ್ಲಾ ಪ್ರವಾಸ

error: Content is protected !!
Scroll to Top