ಶಿರ್ವ: ಗಾಂಜಾ ಮಾರಾಟ ➤ ಯುವಕನ ಬಂಧನ

(ನ್ಯೂಸ್ ಕಡಬ) newskadaba.com ಶಿರ್ವ, ಜ. 07. ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೋರ್ವನನ್ನು ಬಂಧಿಸಿದ ಘಟನೆ ಶಿರ್ವದಲ್ಲಿ ನಡೆದಿದೆ.


ಆರೋಪಿಯನ್ನು ಒರಿಸ್ಸಾ ಮೂಲದ ಬಡಾನಿಡಿಯೂರಿನ ಸಾಗರ್ (22) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 32,000 ಸಾವಿರ ರೂ. ಮೌಲ್ಯದ ಒಂದು ಕೆ.ಜಿ 100 ಗ್ರಾಂ. ಗಾಂಜಾ, 7 ಪ್ಲಾಸ್ಟಿಕ್ ತೊಟ್ಟೆಗಳು, 1200 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕೊಂಬಾರು ಗ್ರಾಮ ಕರಣಿಕ ನೆಬಿ ಸಾಹೇಬ್ ನಿಧನ

error: Content is protected !!
Scroll to Top