(ನ್ಯೂಸ್ ಕಡಬ) newskadaba.com ಕಡಬ, ಜ. 07. ರಸ್ತೆ ಬದಿಯಲ್ಲಿದ್ದ ಹಸಿಮೀನು ಮಾರಾಟದ ಸ್ಟಾಲ್ ಗಳನ್ನು ಸಂತೆಕಟ್ಟೆಯ ಬಳಿ ಇರುವ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ.
ಮೀನು ಮಾರುಕಟ್ಟೆಯ ದುರಸ್ತಿ ಮಾಡದ ಮತ್ತುಕಳೆದ ಮೂರು ವರ್ಷಗಳಿಂದ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇದೀಗ ಕಡಬದ ರಸ್ತೆ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ಸ್ಟಾಲ್ ಗಳು ಸಂತೆ ಮಾರುಕಟ್ಟೆಗೆ ಬಂದಿವೆ.