(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 06. ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂಬ ಪ್ರಸ್ತಾಪ ಕೇಳಿಬಂದಿದ್ದು, ಮುಖ್ಯಮಂತ್ರಿ ಬಿಎಸ್.ವೈ ಅವರೊಂದಿಗೆ ಬಿಜೆಪಿ ಶಾಸಕರ ಸಭೆಯಲ್ಲಿ ತಾ.ಪಂ. ವ್ಯವಸ್ಥೆ ಕಾನೂನು ತಿದ್ದುಪಡಿ ತರುವಂತೆ ಸಲಹೆ ನೀಡಿರುವುದಾಗಿ ಕೇಳಿಬಂದಿದೆ.
ಗ್ರಾ.ಪಂ, ತಾ.ಪಂ. ಹಾಗೂ ಜಿ.ಪಂ. ಹೀಗೆ ಮೂರು ವ್ಯವಸ್ಥೆಗಳಿದ್ದರೂ ತಾ.ಪಂ. ಗೆ ಯಾವುದೇ ಕೆಲಸ ಇಲ್ಲದಂತಾಗುತ್ತದೆ. ಅವಶ್ಯವಿಲ್ಲದ ಈ ವ್ಯವಸ್ಥೆಯಿಂದ ಆರ್ಥಿಕ ಹೊರೆ ಉಂಟಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಪಂಚಾಯತ್ ರಾಜ್ ಕಾಯ್ದೆಯಲ್ಲಿ ತಾ.ಪಂ. ಕೈಬಿಡಲು ಅವಕಾಶವಿದ್ದು, ಕಾನೂನು ತಿದ್ದುಪಡಿ ತರುವಂತೆ ಸಲಹೆ ನೀಡಲಾಗಿದೆ.