ಹೆಜಮಾಡಿ: ಬಾವಿಗೆ ಹಾರಿ ವೃದ್ದೆ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ಹೆಜಮಾಡಿ, ಜ. 06. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ದೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಹೆಜಮಾಡಿಯಲ್ಲಿ ನಡೆದಿದೆ.





ಮೃತ ವೃದ್ದೆಯನ್ನು ಕುಸುಮ ಎಚ್.ರಾವ್ (70) ಎಂದು ಗುರುತಿಸಲಾಗಿದೆ. ಪುತ್ತೂರಿನವರಾದ ಇವರ ಪತಿಯು ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದು, ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಎರಡು ತಿಂಗಳ ಹಿಂದೆ ಹೆಜಮಾಡಿಯ ಸಹೋದರನ ಮನೆಗೆ ಬಂದಿದ್ದು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಬಳಲುತ್ತಿದ್ದ ಇವರು ಸೋಮವಾರದಂದು ನಾಪತ್ತೆಯಾಗಿದ್ದರು. ಬಳಿಕ ಹುಡುಕಾಟ ನಡೆಸಿದಾಗ ಶಿವನಗರ ರೋಹಿತ್ ರಾವ್ ಎಂಬವರ ಆವರಣವಿಲ್ಲದ ಬಾವಿಯಲ್ಲಿ ಅವರ ಮೃತದೇಹವು ಕಂಡುಬಂದಿದೆ. ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top