ಕಡಬ: ಅಂಗನವಾಡಿ ಶಿಕ್ಷಕಿಯನ್ನು ಒಳ ಬಿಡದೆ ಆತಂಕ ಸೃಷ್ಟಿಸಿದ ವ್ಯಕ್ತಿ ➤ ಮುಂದೇನಾಯ್ತು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಜ.06. ಇಲ್ಲಿನ ಸೈಂಟ್ ಆ್ಯನ್ಸ್ ಶಾಲೆಯ ಬಳಿಯಿರುವ ಕಡಬ ಚರ್ಚ್ ಅಂಗನವಾಡಿ ಕೇಂದ್ರದ ಮುಂಭಾಗದ ವರಾಂಡದಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಶಿಕ್ಷಕಿಯನ್ನು ಒಳಗೆ ಪ್ರವೇಶಿಸಲು ಬಿಡದೆ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮಾನಸಿಕ ಅಸ್ವಸ್ಥನಂತೆ ತೋರುತ್ತಿದ್ದ ವ್ಯಕ್ತಿಯೋರ್ವ ವರಾಂಡದಲ್ಲಿ ಕುಳಿತು ಶಿಕ್ಷಕಿಯನ್ನು ಅಂಗನವಾಡಿಯ ಒಳಗೆ ತೆರಳಲು ಬಿಡದೆ ಆತಂಕ ಸೃಷ್ಟಿಸಿದ್ದ. ಅಲ್ಲದೇ ಅಂಗನವಾಡಿಯ ಪರಿಸರದಲ್ಲಿದ್ದ ಹೂವಿನ ಗಿಡಗಳನ್ನು ಕಿತ್ತೆಸೆದು, ಟ್ಯಾಂಕ್ ನಲ್ಲಿದ್ದ ನೀರನ್ನೂ ಖಾಲಿ ಮಾಡಿದ್ದ. ಸ್ಥಳಕ್ಕಾಗಮಿಸಿದ ಕಡಬ ಠಾಣಾ ಪೊಲೀಸರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಕಂದಾಯ ಸಿಬ್ಬಂದಿಗಳು ಆತನನ್ನು 108 ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.

Also Read  ಉಪ್ಪಿನಂಗಡಿಯ ವಕೀಲರಿಗೆ ಕೊರೋನಾ ಸೋಂಕು ದೃಢ..!! ➤ ಸುಪ್ರೀಂ ಕೋರ್ಟ್‌ನಿಂದ ಹಿಂತಿರುಗಿ ಐಸೋಲೇಷನ್ ನಲ್ಲಿದ್ದ ವಕೀಲರು.!

 

error: Content is protected !!
Scroll to Top