ವಿಟ್ಲ: ದರೋಡೆ ಪ್ರಕರಣಕ್ಕೆ ಹೊಸ ಟ್ವಿಸ್ಟ್..! ➤➤ ಪ್ರಿಯಕರಣ ಕಾಟ ತಪ್ಪಿಸಲು ಮಹಿಳೆಯಿಂದ ಕಟ್ಟು ಕಥೆ…?

(ನ್ಯೂಸ್ ಕಡಬ) newskadaba.com ವಿಟ್ಲ, ಜ. 05. ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಕಟ್ಟಿ ಹಾಕಿ ಕಳವು ಮಾಡಿದ್ದಾರೆ ಎಂದು ಆರೋಪಿಸಿ, ಮಹಿಳೆಯ ನಾಟಕ ಪ್ರಕರಣವನ್ನು ಬೇಧಿಸುವಲ್ಲಿ ವಿಟ್ಲ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.


ಆಟೋ ಚಾಲಕ ರಫೀಕ್ ಹಾಗೂ ಅವರ ಪುತ್ರ ಮಧ್ಯಾಹ್ನ ನಮಾಜಿಗೆ ತೆರಳಿದ್ದ ವೇಳೆ ಮನೆಯೊಳಗೆ ನುಗ್ಗಿದ ವ್ಯಕ್ತಿ ಜೈನಾಬಿ ಎಂಬವರನ್ನು ಕಟ್ಟಿ ಹಾಕಿ, ಮೈಮೇಲಿದ್ದ ಚಿನ್ನವನ್ನು ಕಿತ್ತುಕೊಂಡು ಹಿಂಬದಿ ಬಾಗಿಲಿನಿಂದ ತಪ್ಪಿಸಿದ್ದಾನೆ ಎಂದು ದೂರಿನಲ್ಲಿ ಜೈನಾಬಿ ವಿವರಿಸಿದ್ದಳು. ಈ ಸಂದರ್ಭ ಮಹಿಳೆಯೇ ಚಿನ್ನವನ್ನು ಬೇರೆಡೆಗೆ ಸಾಗಿಸಿರುವ ಘಟನೆ ಬೆಳಕಿಗೆ ಬಂದಿದೆ. ಇವರ ಪಕ್ಕದಲ್ಲಿ ವಾಸವಿರುವ ಪ್ರಿಯಕರನ ಕಿರುಕುಳಕ್ಕೆ ಮನೆ ಬದಲಿಸುವ ನಿರ್ಧಾರ ಮಾಡಿದ್ದು, ಯಾವ ರೀತಿಯಿಂದ ಹೇಳಿದರೂ ಆಕೆಯ ಪತಿ ಒಪ್ಪದೇ ಇದ್ದಾಗ ಈ ಕಳ್ಳತನದ ನಾಟಕವಾಡಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸ್ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಹೆದರಿದ ಮಹಿಳೆ ಚಿನ್ನಾಭರಣವನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಎಸೆದಿದ್ದಾಳೆನ್ನಲಾಗಿದೆ. ಆಕೆಯ ಪ್ರಿಯಕರನ ತನಿಖೆಯ ಸಂದರ್ಭ ಒಟ್ಟು ಪ್ರಕರಣ ಬೆಳಕಿಗೆ ಬಂದಿದ್ದು, ಭಾಗಶಃ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಸುಳ್ಯ:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top