ಮಂಗಳೂರು: ಬಾವಿಗೆ ಬಿದ್ದ ಸ್ಕೂಟರ್ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ಸ್ಕೂಟರ್ ಸವಾರ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ನಡೆದಿದೆ.

ಮೃತ ಸವಾರನನ್ನು ಎಮ್ಮೆಕೆರೆಯ ಅಜತ್ (22) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಬಜಾಲ್ ನ ಎತ್ತರದ ಪ್ರದೇಶದಲ್ಲಿ ತನ್ನ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿರುವ ಬಾವಿಯ ಆವರಣಕ್ಕೆ ಢಿಕ್ಕಿ ಹೊಡೆದು ಸವಾರ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top