ಬ್ರಹ್ಮಾವರ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಜ. 05. ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾದ ಘಟನೆ ಹಾರಾಡಿಯ ಕುಕ್ಕುಡೆ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು ಸೌಮ್ಯ (23) ಎಂದು ಗುರುತಿಸಲಾಗಿದೆ. ಇವರು ಒಂದು ತಿಂಗಳಿನಿಂದ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಜನವರಿ ಒಂದರಂದು ಎಂದಿನಂತೆ ಕೋರ್ಸ್ ಗೆ ಹೋಗಿ ಬರುವಾಗ ತಡವಾಗುತ್ತದೆ ಎಂದು ಹೋದವರು ನಾಪತ್ತೆಯಾಗಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!