ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಕೆಜಿಎಫ್ 2 ಪತ್ರಿಕೆ ➤ ಪ್ರೇಕ್ಷಕರ ಮನಗೆದ್ದ ಆ ಪತ್ರಿಕೆಯಲ್ಲಿ ಏನಿದೆ ಎಂಬ ಕುತೂಹಲವೇ..⁉️

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.05. ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಚಿತ್ರದ ಯಶಸ್ಸಿನ ಮುಂದುವರಿದ ಭಾಗವಾಗಿ ಕೆಜಿಎಫ್ 2 ಚಿತ್ರೀಕರಣ ಭರದಿಂದ ಸಾಗಿದ್ದು, ಟೀಸರ್ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರ ಮನಗೆಲ್ಲಲು ಚಿತ್ರದ ಕೆಲವೊಂದು ಅಂಶಗಳನ್ನು ಚಿತ್ರತಂಡವು ಹೊರಬಿಡುತ್ತಿದೆ‌.

ಸೋಮವಾರದಂದು ಚಿತ್ರದ ನಾಯಕನ ಹೊಸ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡವು ಸಂಜೆ ವೇಳೆಗೆ ಕೆಜಿಎಫ್ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಚಿತ್ರದ ಪ್ರಮೋಷನ್ ಗೆ ವಿಭಿನ್ನವಾಗಿ ನ್ಯೂಸ್ ಪೇಪರ್ ಬಿಡುಗಡೆಗೊಳಿಸಿದ್ದು, ಕೆಜಿಎಫ್ ಟೈಮ್ಸ್ ಹೆಸರಿನಲ್ಲಿ ಹಳೆಕಾಲದ ಪತ್ರಿಕೆಯನ್ನು ಹೋಲುವ ಪ್ರತಿಯನ್ನು ಕನ್ನಡ, ಇಂಗ್ಲೀಷ್, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಪತ್ರಿಕೆಯಲ್ಲಿ ಕೆಜಿಎಫ್ 2 ಕಥೆಯ ಒಂದಂಶವನ್ನು, ಮುದ್ರಿಸಲಾಗಿದ್ದು, ಪತ್ರಿಕೆಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

Also Read  ರಾಜ್ಯದಲ್ಲಿ ಇಂದು ಮೂವರಿಗೆ ಕೊರೋನ ಸೋಂಕು ದೃಢ

error: Content is protected !!
Scroll to Top