ವಿಟ್ಲ: ಅಪ್ರಾಪ್ತ ಬಾಲಕ ನಾಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04. ಅಪ್ರಾಪ್ತ ಬಾಲಕನೋರ್ವ ಕಾಣೆಯಾದ ಘಟನೆ ಕರೋಪಾಡಿಯಿಂದ ವರದಿಯಾಗಿದೆ.

ಬಾಲಕನನ್ನು ಹನುಮಂತ ಎಂಬವರ ಮಗ ಗಣೇಶ್ (15) ಎಂದು ಗುರುತಿಸಲಾಗಿದೆ. ಕೊರೋನಾ ಕಾರಣದಿಂದ ಶಾಲೆಗೆ ರಜೆ ಇದ್ದ ವೇಳೆ ಆನ್-ಲೈನ್ ಕ್ಲಾಸಿಗೆಂದು ಮೊಬೈಲ್ ತಗೊಂಡು ಪಬ್ ಜೀ ಆಟ ಆಡುತ್ತಿದ್ದುದ್ದನ್ನು ಗಮನಿಸಿದ ತಂದೆಯು ಬುದ್ದಿವಾದ ಹೇಳಿದ್ದರು. ಇದನ್ನು ಲೆಕ್ಕಿಸದೇ ಇದ್ದ ಕಾರಣ ಶಾಲಾ ಶಿಕ್ಷಕರಿಗೆ ವಿಷಯ ತಿಳಿಸಿ ಗಣೇಶನಿಗೆ ಬುದ್ದಿವಾದ ಹೇಳಿದ ಶಿಕ್ಷಕರು ಸೋಮವಾರ ಶಾಲೆಗೆ ಬರುವಂತೆ ಹೇಳಿದ್ದರು. ಮಧ್ಯಾಹ್ನ ಶಾಲೆ ಬಿಟ್ಟು ಬಂದವನು ಈವರೆಗೆ ಮನೆಗೆ ಬರದೇ ನಾಪತ್ತೆಯಾಗಿದ್ದಾನೆ.

Also Read  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧಾ ವಿಜೇತರ ಆಯ್ಕೆ

error: Content is protected !!
Scroll to Top