ಲಂಚ ಪಡೆಯುತ್ತಿದ್ದ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಮೈಸೂರು, ಜ. 04.  ಲಂಚ ಪಡೆಯುತ್ತಿದ್ದಾಗ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಮೈಸೂರು ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.

 

ಜಮೀನು ಸರ್ವೇ ಮಾಡಿಕೊಡಲು 8 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಭೂಮಾಪನಾ ಇಲಾಖೆಯ ಸರ್ವೆಯರ್‌ ಹನುಮಂತರಾಯಪ್ಪ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಎಸಿಬಿ ಎಸ್‌.ಪಿ ಡಾ.ಸುಮ್ ಡಿ ಪನೇಕರ್ ಮಾರ್ಗದರ್ಶನದಂತೆ ಡಿಎಸ್‌.ಪಿ ಎಚ್. ಪರಶುರಾಮಪ್ಪ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.

Also Read  ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಪಾಣೆಮಂಗಳೂರು ಹಾಗೂ ಯೇನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಭಾಗಿತ್ವ ➤ ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

error: Content is protected !!
Scroll to Top