ಹೊಟೇಲ್ ನಲ್ಲಿ ಮರೆತು ಹೋದ ಬ್ಯಾಗನ್ನು ಕೊರಿಯರ್ ಮಾಡಿ ಪ್ರಾಮಾಣಿಕತೆ ➤ ಮರ್ಧಾಳದ ಭಗವತೀ ಹೊಟೇಲ್ ನ ಗೋಪಾಲರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಜ.04. ಉಪಾಹಾರ ಸೇವಿಸಲು ಬಂದಿದ್ದ ಯಾತ್ರಾರ್ಥಿಗಳ ತಂಡವೊಂದು ಬ್ಯಾಗನ್ನು ಹೊಟೇಲಿನಲ್ಲೇ ಮರೆತು ಹೋಗಿರುವುದನ್ನು ಮನಗಂಡ ಹೊಟೇಲ್ ಮಾಲಕ ಬ್ಯಾಗ್ ನ ವಾರಸುದಾರರನ್ನು ಸಂಪರ್ಕಿಸಿ ಬ್ಯಾಗನ್ನು ಕೊರಿಯರ್ ಮೂಲಕ ಕಳುಹಿಸಿಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.

ಮರ್ಧಾಳದ ಭಗವತೀ ಹೋಟೆಲ್ ಗೆ ಉಡುಪಿಯ ಯಾತ್ರಾರ್ಥಿಗಳ ತಂಡವೊಂದು ಉಪಾಹಾರ ಸೇವಿಸಲೆಂದು ಆಗಮಿಸಿತ್ತು. ಅವರು ಹಿಂತಿರುಗಿದ ಮೇಲೆ ಬ್ಯಾಗೊಂದು ಬಾಕಿಯಾಗಿರುವುದನ್ನು ಗಮನಿಸಿದ ಹೊಟೇಲ್ ಮಾಲಕ ಗೋಪಾಲಕೃಷ್ಣ ಎಂಬವರು ಅದರಲ್ಲಿದ್ದ ವಿಳಾಸವನ್ನು ಪತ್ತೆಹಚ್ಚಿ, ಮೊಬೈಲ್ ಸಂಖ್ಯೆ ಸಂಗ್ರಹಿಸಿ ಬ್ಯಾಗ್ ನ ವಾರಸುದಾರರನ್ನು ಸಂಪರ್ಕಿಸಿದ್ದಲ್ಲದೆ ಬ್ಯಾಗನ್ನು ಕೊರಿಯರ್ ಮಾಡಿ ಕಳುಹಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ‌.

Also Read  ಬಂಟ್ವಾಳ: ಹೆಚ್ಚುವರಿ ತಪಾಸಣಾ ಕೇಂದ್ರ ➤ ಪರಿಶೀಲನೆ ಇನ್ನಷ್ಟು ಬಿಗಿ

error: Content is protected !!
Scroll to Top