ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಕುಮಾರ ಪರ್ವತ ಯಾತ್ರೆ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 04. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಇಂದು ಮುಂಜಾನೆ ಕುಮಾರ ಪರ್ವತ ಯಾತ್ರೆಯನ್ನು ಆರಂಭಿಸಲಾಯಿತು.

ಅಭಿವೃದ್ದಿ ಸಮಿತಿಯ ಸದಸ್ಯ ಮೋಹನ್ ರಾಮ್ ಸುಳ್ಮಿಯವರು ತೆಂಗಿನಕಾಯಿ ಒಡೆದು, ಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಿಬ್ಬಂದಿಗಳು ಯಾತ್ರೆಯನ್ನು ಕೈಗೊಂಡಿದ್ದಾರೆ.

error: Content is protected !!

Join the Group

Join WhatsApp Group