ವಿಟ್ಲ: ಎಸ್ಡಿಪಿಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣ ಖಂಡಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04. ಎಸ್ಡಿಪಿಐ ಕಛೇರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಖಂಡಿಸಿ ಇಂದು ವಿಟ್ಲ ವಲಯ ಎಸ್ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿಯ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ, ಪೊಲೀಸ್ ಠಾಣೆಗೆ ರ್ಯಾಲಿ ನಡೆಸಲು ಮುಂದಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆ ಹಿಂತೆಗೆಯುವಂತೆ ಮನವಿ ಮಾಡಿದರು. ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ ಎಸ್.ಐ ರಾಜೇಶ್ ಕೆ.ವಿ ಅವರು ತಕ್ಷಣವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

Also Read  ಎಸ್ ಬಿ ಕಾಲೇಜ್ ನೆಲ್ಯಾಡಿಯಲ್ಲಿ ನಾಳೆ ಪ್ರತಿಭೆಗಳ ಹಬ್ಬ - ಕಲಾ ಪರ್ವ 2k19

error: Content is protected !!
Scroll to Top