ಸುಬ್ರಹ್ಮಣ್ಯ: ಸದ್ಯದಲ್ಲೇ ತೆರೆಯಲಿದೆ ಬ್ಯಾಂಕ್ ಆಫ್ ಬರೋಡಾ ಎಟಿಎಂ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 04. ಕಳೆದ ಇಪ್ಪತ್ತೈದಯಮು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಜಯಾ ಬ್ಯಾಂಕ್ ಇದೀಗ ಬ್ಯಾಂಕ್ ಆಫ್ ಬರೋಡಾ ಆದ ನಂತರವೂ ಇದುವರೆಗೂ ಎಟಿಎಂ ಹೊಂದಿಲ್ಲ ಇದರಿಂದಾಗಿ ಬ್ಯಾಂಕ್ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಉದ್ಯಮಿ ನಿತಿನ್ ನೂಚಿಲ ಅವರು ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದರು.

ಈ ದೂರಿನನ್ವಯ ಸ್ಪಂದನೆ ನೀಡಿದ ಪ್ರಧಾನಿ ಕಾರ್ಯಾಲಯವು ಈ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಬ್ಯಾಂಕ್ ಆಫ್ ಬರೋಡಾದ ಗುಜರಾತ್ ನ ಪ್ರಧಾನ ಕಛೇರಿಯ ಜನರಲ್ ಮ್ಯಾನೇಜರ್ ಗೆ ಆದೇಶಿಸಿದ್ದಾರೆ. ಇದರನುಸಾರ ಪ್ರಧಾನಿ ಕಾರ್ಯಾಲಯವು ಮಂಗಳೂರು ರೀಜನಲ್ ಕಛೇರಿಗೆ ಆದೇಶ ನೀಡಿದ್ದು, ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ನಿತಿನ್ ಅವರಿಗೆ ಇ-ಮೇಲ್ ಮೂಲಕ ತಕ್ಷಣವೇ ಎಟಿಎಂ ಕೆಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

Also Read  ವೈದ್ಯನ ನಿರ್ಲಕ್ಷ್ಯಕ್ಕೆ ಏಳರ ಬಾಲಕ ಬಲಿ - ಪ್ರಕರಣ ದಾಖಲು

error: Content is protected !!
Scroll to Top