(ನ್ಯೂಸ್ ಕಡಬ) newskadaba.com ಪುತ್ತೂರು, ಜ. 04. ಒಂದು ಕಡೆಯಲ್ಲಿ ಚಿರತೆ ಭಯ ಹುಟ್ಟಿಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಕಾಡುಕೋಣಗಳು ಕೃಷಿಯನ್ನು ನಾಶ ಮಾಡುತ್ತಿವೆ. ಸುಮಾರು 10 ಕ್ಕೂ ಅಧಿಕ ಕಾಡುಕೋಣಗಳ ಹಿಂಡೊಂದು ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದು, ಬಪ್ಪಪುಂಡೇಲು ಹೊನ್ನಪ್ಪ ನಾಯ್ಕ ಎಂಬವರ ಗದ್ದೆಗೆ ದಾಳಿ ಮಾಡಿದ ಕೋಣಗಳು ಭತ್ತದ ಪೈರನ್ನು ನಾಶಮಾಡಿದೆ.
ಇನ್ನೇನು ಪೈರು ತೆನೆ ಬಿಡುವ ಹಂತದಲ್ಲಿತ್ತು. ಎರಡು ದಿನಗಳಿಂದ ರಾತ್ರಿ ವೇಳೆ ಕಾಡುಕೋಣಗಳು ದಾಳಿ ಮಾಡಿ ಮುಕ್ಕಾಲು ಭಾಗ ಪೈರನ್ನು ಪೈರನ್ನು ತಿಂದು ಹಾಕಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಹೊನ್ನಪ್ಪ ನಾಯ್ಕರವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.