ಟೋಲ್ ಸಿಬ್ಬಂದಿ ಮೇಲೆ ಹಲ್ಲೆಗೈದ ಕಿಡಿಗೇಡಿಗಳು ಹಲ್ಲೆ ➤ ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ. 04. ಕಾರು ಚಾಲಕನಲ್ಲಿ ಟೋಲ್ ಕೇಳಿದ್ದಕ್ಕೆ ಕಾರಿನಲ್ಲಿದ್ದ ಏಳೆಂಟು ಮಂದಿ ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಸಿಬ್ಬಂದಿಯ ಕೈ ಮೂಲೆ ಮುರಿದ ಘಟನೆ ಸುರತ್ಕಲ್ ನ ಟೋಲ್ ಗೇಟ್ ನಲ್ಲಿ ರವಿವಾರ ರಾತ್ರಿ ನಡೆದಿದೆ.

ಭಾನುವಾರದಂದು ರಾತ್ರಿ ವೇಳೆ  ಟೋಲ್ ಗೇಟ್ ಗೆ ಬಿಳಿ ಬಣ್ಣದ ಕೆ.ಎ.47 ರಿಜಿಸ್ಟ್ರೇಷನ್ ನಂಬರಿನ ಸ್ವಿಫ್ಟ್ ಕಾರೊಂದು ಬಂದಿದ್ದ ವೇಳೆ ಟೋಲ್ ಸಿಬ್ಬಂದಿಯು ಕಾರಿನ ಚಾಲಕನಲ್ಲಿ ಟೋಲ್ ಕೇಳಿದ್ದಾನೆ, ಅಷ್ಟಕ್ಕೆ ಸಿಟ್ಟುಗೊಂಡ ಕಾರಿನಲ್ಲಿದ್ದ ಸುಮಾರು 7-8 ಮಂದಿಯ ತಂಡವು  ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಯ ಜೊತೆ ಜಗಳವಾಡಿದ್ದಲ್ಲದೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೋತ್ತಿಗಾಗಲೇ ಟೋಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದು ಪೊಲೀಸರು ಬರುವ ಮೊದಲೇ ಹಲ್ಲೆ ನಡೆಸಿದ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಟೋಲ್ ಗೇಟ್ ನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಗಳು  ಸೆರೆಯಾಗಿದ್ದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಕಾರು

error: Content is protected !!
Scroll to Top