ವಿಟ್ಲ: ಎಸ್ಡಿಪಿಐ ಕಛೇರಿಗೆ ಬೆಂಕಿ‌ ಹಚ್ಚಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04. ಎಸ್ಡಿಪಿಐ ಕಛೇರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ಇಂದು ಘಟನೆ ಬೆಳಕಿಗೆ ಬಂದಿದ್ದು, ಭಾನುವಾರ ರಾತ್ತಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಪೈಂಟ್ ಡಬ್ಬ ಪತ್ತೆಯಾಗಿದ್ದು, ಪೈಂಟ್ ಸುರಿದು ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಎಸ್ಡಿಪಿಐ ಮುಖಂಡರು ಆಗ್ರಹಿಸಿದ್ದಾರೆ.

Also Read  ಕಡಬ: ಡಾ. ತ್ರಿಮೂರ್ತಿ ಅವರಿಗೆ ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿ

error: Content is protected !!
Scroll to Top