ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಗೆ ಮಾನ್ಯ ಡಿಜಿಪಿ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 04.  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ  ದಳ ಮೇರಿಹಿಲ್ ಮಂಗಳೂರು ಕಛೇರಿಗೆ  ಡಾ|| ಅಮರ್ ಕುಮಾರ್ ಪಾಂಡೆ, ಐಪಿಎಸ್ ಆರಕ್ಷಕ ಮಹಾನಿರ್ದೇಶಕರು   ಹಾಗೂ ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು ಪೌರರಕ್ಷಣೆ  ಇವರು ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಕಛೇರಿ ಕಡತಗಳನ್ನು  ಪರಿಶೀಲಿಸಿದರು. ಕಾಲಕಾಲಕ್ಕೆ  ಗೃಹರಕ್ಷಕರಿಗೆ ಸೂಕ್ತ  ತರಬೇತಿ ನೀಡಬೇಕು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ  ಎಂದರು. ಗೃಹರಕ್ಷಕರ ವೇತನವನ್ನು ಸಕಾಲದಲ್ಲಿ ನೀಡಲು ಬೇಕಾದ ಅಗತ್ಯ ತುರ್ತು ಕ್ರಮಗಳನ್ನು ಮಾಡಲು ಸಮಾದೇಷ್ಟರಿಗೆ ಸೂಚನೆ ನೀಡಿದರು.

Also Read  ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯ

ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಶ್ರೀ ಶಶಿ ಕುಮಾರ್, ಐಪಿಎಸ್, ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕರಾದ  ಡಾ|| ಲಕ್ಷ್ಮೀಪ್ರಸಾದ್, ಐಪಿಎಸ್, ಡಿಸಿಪಿ ಶ್ರೀ ಹರಿರಾಮ್ ಶಂಕರ್, ಐಪಿಎಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣೆ ಪಡೆ ಚೀಫ್‌ ವಾರ್ಡನ್  ಡಾ||  ಮುರಲೀಮೋಹನ್ ಚೂಂತಾರು, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಉಪ ಸಮಾದೇಷ್ಟರಾದ  ಶ್ರೀ ರಮೇಶ್, ಕಛೇರಿ ಸಿಬ್ಬಂದಿಗಳು ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು.

error: Content is protected !!
Scroll to Top