ಮರ್ಧಾಳ: ಚಲಿಸುತ್ತಿದ್ದ ಡಿಯೋ ವಾಹನದ ಹಿಂಬದಿ ಚಕ್ರ ಸ್ಫೋಟ ➤ ಸವಾರ ಅಪಾಯದಿಂದ ಪಾರು



(ನ್ಯೂಸ್ ಕಡಬ) newskadaba.com ಕಡಬ, ಜ.03. ಚಲಿಸುತ್ತಿದ್ದ ಹೋಂಡಾ ಡಿಯೋ ವಾಹನದ ಹಿಂಬದಿ ಚಕ್ರ ಸ್ಫೋಟಗೊಂಡ ಪರಿಣಾಮ ಡಿಯೋ ರಸ್ತೆಗೆಸೆಯಲ್ಪಟ್ಟು ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.





ಗಾಯಾಳುವನ್ನು ಕಡಬ ತಾಲೂಕಿನ ಕಳಾರ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ಅಶ್ರಫ್ ಹೋಂಡಾ ಡಿಯೋ ವಾಹನದಲ್ಲಿ ಕಡಬದಿಂದ ಮರ್ಧಾಳ ಕಡೆಗೆ ತೆಳುತ್ತಿದ್ದ ವೇಳೆ ವಾಹನದ ಹಿಂಬದಿ ಚಕ್ರ ಸ್ಫೋಟಗೊಂಡಿದೆ. ಘಟನೆಯಲ್ಲಿ ಡಿಯೋ ವಾಹನದ ಒಂದು ಪಾರ್ಶ್ವ ಹಾನಿಗೊಳಗಾಗಿದೆ.






error: Content is protected !!
Scroll to Top