ಸುಳ್ಯ: ಮದುವೆ ದಿಬ್ಬಣಕ್ಕೆ ಹೊರಟ ಬಸ್ ಪಲ್ಟಿ ➤ ಐವರು ಮೃತ್ಯು, 20 ಮಂದಿಗೆ ಗಾಯ



(ನ್ಯೂಸ್ ಕಡಬ) newskadaba.com ಸುಳ್ಯ, ಜ. 03. ಪುತ್ತೂರು ಕಡೆಯಿಂದ ಆಲೆಟ್ಟಿ ಮೂಲಕ ಪಾಣತ್ತೂರು ಕಡೆಗೆ ಮದುವೆಗೆಂದು ಹೋಗುತ್ತಿದ್ದ ದಿಬ್ಬಣದ ಖಾಸಗಿ ಬಸ್ಸೊಂದು ಕೇರಳದ ಪಾನತ್ತೂರು ಎಂಬಲ್ಲಿ ಪಲ್ಟಿಯಾದ ಘಟನೆ ನಡೆದಿದೆ.





ಪಾಣತ್ತೂರು ಬಳಿಯ ಗಡಿಗುಡ್ಡೆ ಪೆರಿಯಾರಂ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ  ಮನೆಯೊಂದರ ಮೇಲೆ ಬಸ್ ಬಿದ್ದು ಈ ದುರಂತ ಸಂಭವಿಸಿದೆನ್ನಲಾಗಿದೆ. ಇದರಲ್ಲಿ ಸುಮಾರು 60 ಮಂದಿ ಪ್ರಯಾಣಿಸುತ್ತಿದ್ದು, ದುರಂತದಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿದೆ. ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಂಞಂಗಾಡ್ ಆಸ್ಪತ್ರೆಗೆ ಸೇರಿಸಲಾಗಿದೆ.






error: Content is protected !!
Scroll to Top