ಕರ್ತವ್ಯ ನಿರತ ಕುಟ್ರುಪ್ಪಾಡಿ ಪಿಡಿಓ ಮೇಲೆ ಹಲ್ಲೆ ಪ್ರಕರಣ ➤ ಸ್ಟೇಟಸ್ ಪ್ರಕರಣದಲ್ಲಿ ಬಂಧಿತನ ಮೇಲೆ ಮತ್ತೊಂದು ಕೇಸ್

(ನ್ಯೂಸ್ ಕಡಬ) newskadaba.com ಕಡಬ, ಜ.03. ಕರ್ತವ್ಯ ನಿರತ ಕುಟ್ರುಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಐವರ ವಿರುದ್ಧ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ಕರ್ತವ್ಯದ ಮೇರೆಗೆ ತೆರಳಿದ್ದ ಸಂದರ್ಭದಲ್ಲಿ ಹೊಸ್ಮಠ ದೇರಾಜೆ ಕ್ರಾಸ್ ಬಳಿಯ ನಿವಾಸಿ ಯಾಕೂಬ್ ಸೇರಿದಂತೆ ಐವರು ಕಾರನ್ನು ತಡೆದು ಹಲ್ಲೆ ನಡೆಸಿ, ಮೊಬೈಲ್ ಫೋನ್ ಕಸಿದು ದಾಖಲೆಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಪಿಡಿಓ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ಯಾಕೂಬ್ ಈಗಾಗಲೇ ಜ್ಯೂಸ್ ಸೆಂಟರ್ ಗೆ ಆಗಮಿಸಿದ ಹುಡುಗಿಯ ಫೋಟೋ ತೆಗೆದು ಸ್ಟೇಟಸ್ ಹಾಕಿದ ವಿಚಾರದಲ್ಲಿ ಬಂಧನದಲ್ಲಿದ್ದು, ಇನ್ನುಳಿದ ನಾಲ್ವರಿಗೆ ಪೊಲೀಸರು ಬಲೆ ಬೀಸಿದ್ದಾರೆ.

Also Read  ನಾಳೆ (ಡಿ.28) ನಡೆಯಬೇಕಿದ್ದ ಪಾಲೆತ್ತಡ್ಕ ಶಾಲಾ ರಜತ ಮಹೋತ್ಸವ ಕಾರ್ಯಕ್ರಮ ಜನವರಿ 04ಕ್ಕೆ ಮುಂದೂಡಿಕೆ

error: Content is protected !!
Scroll to Top