ಉಡುಪಿ: ಸಮುದ್ರದಲ್ಲಿ ಮುಳುಗಿದ ನಾಲ್ವರ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 03. ಕಾಪು ಬೀಚ್ ನಲ್ಲಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ನಡೆದಿದೆ.


ಬೀಚ್ ಗೆ ತೆರಳಿದ್ದ ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ಇವರನ್ನು ಸ್ಥಳೀಯರು ಸಮುದ್ರಕ್ಕೆ ಇಳಿಯುವುದನ್ನು ವಿರೋಧಿಸಿದರೂ, ನಿರ್ಲಕ್ಷ್ಯ ಮಾಡಿ ಆಟವಾಡಲು ಇಳಿದಿದ್ದರು. ನಂತರ ಈ ತಂಡವು ಏಕಾಏಕಿ ನೀರಿನಲ್ಲಿ ಮುಳುಗಿದ್ದು, ಇದನ್ನು ಕಂಡ ಸ್ಥಳೀಯರಾದ ಪ್ರಶಾಂತ್ ಕರ್ಕೇರ, ಪ್ರದೀಪ್ ಹಾಗೂ ಜೇಕ್ಸನ್ ಎಂಬವರು ಸಮುದ್ರಕ್ಕೆ ಇಳಿದು ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

Also Read  ಗುಂಡ್ಯ: ನಾಲ್ವರ ತಂಡದಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆ

error: Content is protected !!
Scroll to Top