ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ಪ್ರಸ್ತುತ ಸಾಲಿಗೆ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ಮಾಜಿ ಸೈನಿಕರ ಮಕ್ಕಳು  ಪಿ.ಯು.ಸಿ  2ನೇ ವರ್ಷ ಹಾಗೂ ಡಿಪ್ಲೋಮಾ 3ನೇ ವರ್ಷದಲ್ಲಿ ಶೇ.60 ಅಂಕ ಪಡೆದವರು,  ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆ-2020-21ನೇ ಸಾಲಿಗೆ ಆನ್‍-ಲೈನ್ www.ksb.gov.inನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ,  ಉರ್ವ ಸ್ಟೋರ್ಸ್, ಅಶೋಕನಗರ ಅಂಚೆ, ಮಂಗಳೂರು ಇವರನ್ನು ಸಂಪರ್ಕಿಸುವಂತೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕೆಎಸ್ಸಾರ್ಟಿಸಿ ಯಿಂದ ವಿವಿಧೆಡೆ ಟೂರ್ ಪ್ಯಾಕೇಜ್.... ದರ ಮಾಹಿತಿ ಇಲ್ಲಿದೆ

error: Content is protected !!
Scroll to Top