ರಾಜ್ಯದಲ್ಲಿ ಸದ್ದಿಲ್ಲದೆ ಹರಡುತ್ತಿದೆ ಹೊಸ ಮಾದರಿಯ ಸೋಂಕು⁉️ ➤ ಸುಳಿವು ಬಿಟ್ಟುಕೊಟ್ಟ ಆರೋಗ್ಯ ಸಚಿವರು..‼️

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.02. ರಾಜ್ಯದಲ್ಲಿ ಹೊಸ ಮಾದರಿಯ ಕೊರೋನಾ ಸೋಂಕು ನಿಧಾನವಾಗಿ ಹರಡುತ್ತಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಂತೆ ಕರ್ನಾಟಕದ 10 ಮಂದಿಯಲ್ಲಿ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುಳಿವು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್‍ನಿಂದ ಆಗಮಿಸಿದ್ದ 42 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 32 ಮಂದಿಯಲ್ಲಿ ಕೋವಿಡ್-19 ಪತ್ತೆಯಾಗಿದೆ. 10 ಮಂದಿಯಲ್ಲಿ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿದೆ ಎಂದವರು ತಿಳಿಸಿದ್ದಾರೆ. ರಾಜ್ಯದಲ್ಲಿ ರೂಪಾಂತರ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸುವಂತೆ ಅವರು ಎಚ್ಚರಿಸಿದ್ದಾರೆ.

Also Read  ಬೆಂಗಳೂರು ಹೊಸ ಮೆಟ್ರೋ ಮಾರ್ಗ ಉದ್ಘಾಟನೆಗೆ ದಿನಗಣನೆ

error: Content is protected !!
Scroll to Top