ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಸಿಟ್ಟಿನಿಂದ ಬಾತ್ ರೂಮ್ ನಲ್ಲಿ ಕುಳಿತ ಬಾಲಕ ➤ ಅಗ್ನಿ ಶಾಮಕದಳದವರು ಬಂದಾಗ ಕಾದಿತ್ತು ಅಚ್ಚರಿ…!

(ನ್ಯೂಸ್ ಕಡಬ) newskadaba.com ಮಣಿಪಾಲ, ಜ. 02. ಅಮ್ಮ ಮೊಬೈಲ್ ಕಿತ್ತುಕೊಂಡಳು ಎಂಬ ಕಾರಣಕ್ಕೆ ಯುವಕನೋರ್ವ ಮನೆಯ ಬಾತ್ ರೂಮ್ ನಲ್ಲಿ ಬಾಗಿಲು ಹಾಕಿ ಗಂಟೆಗಟ್ಟಲೆ ಕುಳಿತು ಅವಾಂತರ ಸೃಷ್ಟಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.


ರಾತ್ರಿಯಿಡೀ ಮೊಬೈಲಿನಲ್ಲಿ ಆಟವಾಡುತ್ತಿದ್ದ ಮಗನಿಗೆ ಗದರಿಸಿದ ತಾಯಿಯು ಮಗನಿಂದ ಮೊಬೈಲ್ ಕಿತ್ತುಕೊಂಡಿದ್ದು, ಇದರಿಂದ ಕೋಪಗೊಂಡ ಮಗ ಮನೆಯ ಬಾತ್ ರೂಮ್ ನಲ್ಲಿ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಕೂತಿದ್ದ. ತಾಯಿ ಅದೆಷ್ಟು ಬಾರಿ ಕರೆದರೂ ಮಗ ಬಾಗಿಲು ತೆರೆಯದಿದ್ದಾಗ, ಆತಂಕಗೊಂಡ ತಾಯಿಯು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಕೂಡಲೆ ಧಾವಿಸಿದ ಅಗ್ನಿ ಶಾಮಕ ದಳದ ತಂಡವು ಹಗ್ಗದ ಸಹಾಯದಿಂದ ನಾಲ್ಕನೆ ಮಹಡಿಗೆ ಇಳಿದು ಬಾತ್ ರೂಮ್ ನ ಕಿಟಕಿ ಮುರಿದು ಒಳ ಪ್ರವೇಶಿಸಿ, ಬಾತ್ ರೂಮ್ ನಲ್ಲಿ ಮಾನಸಿಕವಾಗಿ ನೊಂದಿದ್ದ ಯುವಕ ಅರೆಪ್ರಜ್ಞಾ ಅವಸ್ಥೆಯಲ್ಲಿ ಕಂಡುಬಂದಿದ್ದು ಯುವಕನನ್ನು ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ವಸಂತ್ ಕುಮಾರ್, ಅಶ್ವಿನ್ ಸನೀಲ್, ಸುಧಾಕರ್ ದೇವಾಡಿಗ, ರವಿ ನಾಯಕ್, ಚಾಲಕ ಆಲ್ವಿನ್ ಪ್ರಶಾಂತ್, ಗೃಹ ರಕ್ಷದ ಪ್ರಭಾಕರ ದಾವುದ್, ಹಕೀಮ್ ಪಾಲ್ಗೊಂಡಿದ್ದರು.

Also Read  ಉಡುಪಿ: ಬ್ಲೇಡ್‌ನಿಂದ ಇರಿದು ಯುವಕನ ಕೊಲೆಗೆ ಯತ್ನ     ➤ ಇಬ್ಬರು ವಶಕ್ಕೆ..!

error: Content is protected !!
Scroll to Top