ಮಾವನನ್ನೇ ಕೊಂದ ಪಾಪಿ ಅಳಿಯ…! ➤ ಕಾರಣವೇನೆಂದು ಗೊತ್ತೇ…❓

(ನ್ಯೂಸ್ ಕಡಬ) newskadaba.com ಕಾರ್ಕಳ, ಜ. 02. ಅಳಿಯನೋರ್ವ ತನ್ನ ಮಾವನ ಎಡಕೆನ್ನೆ ಹಾಗೂ ಮರ್ಮಾಂಗಕ್ಕೆ ಕೊಟ್ಟ ಏಟಿಗೆ ಮಾವ ಮೃತಪಟ್ಟ ಘಟನೆ ಕಾರ್ಕಳ ಬಂಗ್ಲೆಗುಡ್ಡೆ ಪರಿಸರದಲ್ಲಿ ನಡೆದಿದೆ.

ಮೃತರನ್ನು ಬಂಗ್ಲೆಗುಡ್ಡೆ ಹಂಚಿಕಟ್ಟೆ ನಿವಾಸಿ ಶೇಖ್‌ ಅಬೂಬಕ್ಕರ್‌ (57) ಎಂದು ಗುರುತಿಸಲಾಗಿದೆ. ಬಂಗ್ಲೆಗುಡ್ಡೆ ಹಂಚಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಮಗಳ ಗಂಡ ತೌಸಿಫ್‌ ಡಿ. 31ರಂದು ಮಾವನೊಂದಿಗೆ ಜಗಳಕ್ಕಿಳಿದು ಎಡಕೆನ್ನೆಗೆ ಹೊಡೆದು, ಮರ್ಮಾಂಗಕ್ಕೆ ಬಲವಾಗಿ ತುಳಿದಿರುತ್ತಾನೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜ. 1ರಂದು ಮಣಿಪಾಲ ಆಸ್ಪತ್ರೆಗೆ ರವಾನಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ಸುರತ್ಕಲ್: ಖಾಸಗಿ ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ ➤ ಪ್ರಶ್ನಿಸಿದ ಪ್ರಾಂಶುಪಾಲರಿಗೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು

error: Content is protected !!
Scroll to Top