ಕಡಬ: ಸಮುದಾಯ ಆರೋಗ್ಯ ಕೇಂದ್ರಕ್ಕೆ 14.5 ರೂ. ಲಕ್ಷದ ನೂತನ ಆಂಬ್ಯುಲೆನ್ಸ್ ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ಜ.02. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುಮಾರು 14.5 ಲಕ್ಷ ರೂ. ವೆಚ್ಚದಲ್ಲಿ ಕೊಡಮಾಡಿದ ಅಂಬ್ಯುಲೆನ್ಸನ್ನು ಸುಳ್ಯ ಶಾಸಕ ಎಸ್.ಅಂಗಾರರವರು ಶನಿವಾರದಂದು ಉದ್ಘಾಟಿಸಿದರು.

ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಐದು ನೂತನ ಅಂಬ್ಯುಲೆನ್ಸ್ ಗಳನ್ನು ನೀಡಲಾಗಿದ್ದು, ಈ ಪೈಕಿ ಒಂದು ಅಂಬ್ಯುಲೆನ್ಸನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀಡಲಾಗಿದೆ‌. ನೂತನ ಅಂಬ್ಯುಲೆನ್ಸ್ ನ ಕೀಯನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ರವರಿಗೆ ಶಾಸಕ ಎಸ್.ಅಂಗಾರರವರು ಹಸ್ತಾಂತರಿಸಿ ಮಾತನಾಡುತ್ತಾ, ಅಗತ್ಯ ಬೇಡಿಕೆಯಾಗಿದ್ದ ಅಂಬ್ಯುಲೆನ್ಸ್ ನ್ನು ಈಗಾಗಲೇ ಆಸ್ಪತ್ರೆಗೆ ನೀಡಲಾಗಿದೆ. ಇನ್ನುಳಿದಂತೆ ಡಯಾಲಿಸಿಸ್ ಯಂತ್ರವನ್ನು ವಿಶೇಷ ಆದ್ಯತೆಯ ಮೇರೆಗೆ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Also Read  ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ- ಬೆಳ್ಳಾರೆ ಪಿಎಸೈ ಈರಯ್ಯ

error: Content is protected !!
Scroll to Top