ಮಂಗಳೂರು: ನಕಲಿ ನೋಟಿನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ…! ➤ ದೇವಸ್ಥಾನದ ಹುಂಡಿಯಲ್ಲಿ ನೋಟಿನ ಜೊತೆಗೆ ಬಳಸಿದ ಕಾಂಡೋಮ್ ಹಾಕಿ ವಿಕೃತಿ ಮೆರೆದ ಪಾಪಿಗಳು



(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಇಲ್ಲಿನ ಹಲವು ದೇವಸ್ಥಾನಗಳ ಹುಂಡಿಗಳಿಗೆ ಯಾರೊ ಕಿಡಿಗೇಡಿಗಳು ಬಳಸಿದ ಕಾಂಡೊಮ್ ಹಾಗೂ ನಕಲಿ ನೋಟುಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆದು ಹಾಕಿರುವ ಘಟನೆ ನಡೆದಿದೆ.





ಕಾರಣಿಕ ದೈವಗಳ ದೇವಸ್ಥಾನಗಳಲ್ಲಿ ಈ ಕೃತ್ಯ ನಡೆದಿದ್ದು, ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಗುಡ್ಡೆ ಬಬ್ಬುಸ್ವಾಮಿ ಕ್ಷೇತ್ರ, ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಈ ಕೃತ್ಯವೆಸಗಲಾಗಿದೆ. ಇದು ಧಾರ್ಮಿಕ ಆಚರಣೆ ಹಾಗೂ ನಂಬಿಕೆಗಳಿಗೆ ವಿರುದ್ದವಾಗಿದ್ದು ಜಿಲ್ಲಾದ್ಯಂತ ವ್ಯಾಪಕ‌ ಆಕ್ರೋಷ ವ್ಯಕ್ತವಾಗಿದೆ.






error: Content is protected !!
Scroll to Top