ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದು ಯಾಕೆ ಗೊತ್ತೇ..⁉️ ➤ ರಾಜೀನಾಮೆಯ ಹಿಂದೆ ಕೆಲಸ ಮಾಡಿದ ಕಾಣದ ಕೈ ಯಾವುದು‌..⁉️

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.02. ದಕ್ಷ ಪೊಲೀಸ್ ಅಧಿಕಾರಿಯೆಂಬ ಖ್ಯಾತಿಯನ್ನು ಪಡೆದಿದ್ದ ಅಣ್ಣಾಮಲೈ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಯಾಗಿರುವುದಕ್ಕೆ ಕೊನೆಗೂ ಕಾರಣ ಬಹಿರಂಗಗೊಂಡಿದೆ.

ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ವೇಳೆ ರಾಜೀನಾಮೆ ಕೊಡುವಂತೆ ಪ್ರೇರೇಪಿಸಿದ್ದು ಯಾರು ಎಂಬ ಕುತೂಹಲಕ್ಕೆ ಸ್ವತಃ ಅಣ್ಣಾಮಲೈ ಅವರೇ ತೆರೆ ಎಳೆದಿದ್ದಾರೆ. ಕಾಫಿ ಡೇ ಸಿದ್ದಾರ್ಥ್ ನನ್ನನ್ನು ರಾಜೀನಾಮೆ ಕೊಡಿಸಿದ್ರು ಅಂತ ಖುದ್ದು ಅಣ್ಣಾಮಲೈ ಅವರು ಹೇಳಿದ್ದಾರೆ. ಸುಮಾರು 10 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದು, ಎಸ್ಪಿಯಾದ ನಂತರ ಡಿಐಜಿ, ಐಜಿಯಾಗಿ ಎಸಿ ರೂಮ್ ನಲ್ಲಿ ಕುಳಿತು ಕೆಲಸ ಮಾಡೋದಕ್ಕೆ ಆಸಕ್ತಿ ಇರಲಿಲ್ಲ. ಎರಡು ಜನ ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು, ಊರಿಗೆ ಹೋಗಬೇಕು. ಸಾಧಾರಣ ವ್ಯಕ್ತಿಯಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕೆಂಬ ಆಸೆ ಸರ್ ಎಂದು ಕಾಫಿಡೇ ಮಾಲಕರಾಗಿದ್ದ ಸಿದ್ದಾರ್ಥ್ ಅವರ ಬಳಿ ಹೇಳಿದ್ದೆ. ಕಾಫಿ ಡೇ ಚೇಂಬರ್ ರೂಮ್ ನಲ್ಲಿ ಕುಳಿತು ಮೂರುವರೆ ಗಂಟೆಗಳ ಕಾಲ ನಾವು ರಾಜೀನಾಮೆಯ ಬಗ್ಗೆ ಚರ್ಚಿಸಿದ್ದು,ಅಂದೇ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡುವ ಬಗ್ಗೆ ನಾವಿಬ್ಬರು ಸೇರಿ ಡಿಸೈಡ್ ಮಾಡಿರುವುದಾಗಿ ಅವರು ಹೇಳಿದ್ದಾರೆ.

 

ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ದಾರ್ಥ್ ಅವರ ನೆನಪಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿಯಲ್ಲಿ ನಿರ್ಮಾಣಗೊಳ್ಳಲಿರುವ ಸಿದ್ದಾರ್ಥ್ ಹೆಗ್ಡೆ ಪುತ್ಥಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ನಾನು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಕೂಡಲೇ ಕಾಲ್ ಮಾಡಿದ್ದ ಸಿದ್ದಾರ್ಥ್, ಜನ ನಿಮ್ಮನ್ನು ಮೂರ್ಖ ಅನ್ನಬಹುದು, ಪೂಲ್ ಎನ್ನಬಹುದು, ಏನೆಂದರೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಉದ್ದೇಶ ಏನೆಂದು ನನಗೆ ಗೊತ್ತು ಎಂದಿದ್ದ ಅವರು ಇಂದು ನಮ್ಮೊಂದಿಗೆ ಇಲ್ಲ ಎಂದು ಭಾವುಕರಾದರು.

error: Content is protected !!

Join the Group

Join WhatsApp Group