ಎನ್.ಎಸ್.ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜೆಸಿಐ ಸುಳ್ಯ ಸಿಟಿ ವತಿಯಿಂದ ಹೊಸ ವರ್ಷಾಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 01. ಜೆಸಿಐ ಸುಳ್ಯ ಸಿಟಿ ಹಾಗೂ ಎನ್‌.ಎಸ್‌.ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ವತಿಯಿಂದ “ಹೊಸ ವರ್ಷ -2021” ರ ಆಚರಣಾ ಕಾರ್ಯಕ್ರಮವನ್ನು ತೆಂಗಿನ ಗಿಡವನ್ನು ನೆಡುವ ಮೂಲಕ ಕೊಡಿಯಾಲ್ ಬೈಲ್ ಕಾಲೋನಿಯಲ್ಲಿ ಆಚರಿಸಲಾಯಿತು.

 

ಈ ಕಾರ್ಯಕ್ರಮದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ, ಉಬರಡ್ಕ ಗ್ರಾಮ ಪಂಚಾಯತ್ ನ ಸದಸ್ಯರಾದ ಮಮತಾ ಕುದ್ಪಾಜೆ, ನಿವೃತ್ತ ಸೈನಿಕರಾದ ನವೀನ ಕುಮಾರ್ ಹಾಗೂ ಸ್ವಯಂ ಸೇವಕರು, ಜೆಸಿಐ ಸುಳ್ಯ ಸಿಟಿಯ ನಿಯೋಜಿತ ಜೆ.ಸಿ ಚಂದ್ರಶೇಖರ್ ಕನಕಮಜಲು ಹಾಗೂ ಜೆಸಿಐಯ ಪದಾಧಿಕಾರಿಗಳು ಮತ್ತು ಕಾಲೊನಿಯ ಫಲಾನುಭವಿಗಳು ಉಪಸ್ಥಿತರಿದ್ದರು.

Also Read  ಉಡುಪಿ : ಕರ್ತವ್ಯ ಪ್ರಜ್ಞೆ ಮೆರೆದ ಆಶಾ ಕಾರ್ಯಕರ್ತೆ

error: Content is protected !!
Scroll to Top