ಫೇಸ್ ಕ್ರೀಂ ಸೇವಿಸಿ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ಜ. 01. ಮುಖಕ್ಕೆ ಹಚ್ಚುವ ಫೇಸ್ ಕ್ರೀಂ ತಿಂದು ಮಗುವೊಂದು ಮೃತಪಟ್ಟ ಘಟನೆ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಬೆಳಗನಹಳ್ಳಿಯಲ್ಲಿ ನಡೆದಿದೆ.

ಮಹೇಶ್ ಹಾಗೂ ಕನ್ಯಾ ದಂಪತಿಯ ಪುತ್ರ ಮನ್ವಿಷ್ ಮೃತಪಟ್ಟ ಮಗು. ಈತ ಸಂಜೆ ವೇಳೆ ಮನೆಯಲ್ಲಿ ಆಟವಾಡುತ್ತಿದ್ದಾಗ ಮುಖಕ್ಕೆ ಹಚ್ಚುವ ಕ್ರೀಂ ತಿಂದಿದ್ದು, ಪೋಷಕರು ಇದನ್ನು ಗಮನಿಸಿರಲಿಲ್ಲ. ರಾತ್ರಿ ಹತ್ತು ಗಂಟೆಯ ಸಮಯ ವಾಂತಿ ಮಾಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.

Also Read  'ವಿಟ್ಲದಲ್ಲಿ ನಡೆದ ಅತ್ಯಾಚಾರವನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೇ' ? - ಸಚಿವ ದಿನೇಶ್ ಗುಂಡೂರಾವ್ ತಿರುಗೇಟು

error: Content is protected !!
Scroll to Top