ಇಂದಿನಿಂದ ಶಾಲಾ- ಕಾಲೇಜು ಪುನರಾರಂಭ ➤ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕ ಉಚಿತವಾಗಿ ಪ್ರಯಾಣಿಸಲು ಅವಕಾಶ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 01. ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಕಳೆದ ವರ್ಷದ 2019-20ರಲ್ಲಿ ವಿತರಿಸಲಾಗದ ಬಸ್ ಪಾಸ್ ಮೂಲಕ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಹೀಗಾಗಿ ವಿದ್ಯಾರ್ಥಿಗಳು ಹಳೆಯ ಬಸ್ ಪಾಸ್, ಶಾಲೆಗೆ ದಾಖಲಾಗಿರುವ ಶುಲ್ಕ ಪಾವತಿ ರಸೀದಿ ಹಾಗೂ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣ ಮಾಡಬಹುದಾಗಿದೆ. ಇಂದಿನಿಂದ ಸರಕಾರದ ಮುಂದಿನ ಆದೇಶದವರೆಗೆ ಹಳೆಯ ಪಾಸ್ ಮೂಲಕ ಸಂಚರಿಸಬಹುದು.

Also Read  ನಟಿ ರಾಖೀ ಸಾವಂತ್‌ ಪತಿ ಫೆ.27 ರವರೆಗೆ ಪೊಲೀಸ್‌ ವಶಕ್ಕೆ

error: Content is protected !!
Scroll to Top